ಶಿರ್ವ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ; ಮಹಿಳೆ ಮೃತ್ಯು

Share with

ಉಡುಪಿ: ಆಟೋ ರಿಕ್ಷಾಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುಂಜಾಲುಗಿರಿಯ ಪಾಜಕ ಕ್ಷೇತ್ರದ ದ್ವಾರದ ಬಳಿ ನಡೆದಿದೆ.
ಮೃತ ಮಹಿಳೆಯನ್ನು ಆಗ್ನಿಸ್ ನೊರೊನ್ಹಾ (76) ಎಂದು ಗುರುತಿಸಲಾಗಿದೆ. ಇವರು ಸುರೇಶ್ ಎಂಬವರ ಅಟೋ ರಿಕ್ಷಾದಲ್ಲಿ ಅಕ್ಕನ ಮಗಳಾದ ಜೆಸಿಂತಾ ಮೆನೇಜಸ್ ಅವರೊಂದಿಗೆ ಪಡುಬೆಳ್ಳೆಯಿಂದ ಸುಬಾಸ್ ನಗರಕ್ಕೆ ತೆರಳುತ್ತಿದ್ದರು. ಈ ವೇಳೆ ಸುಬಾಸ್ ನಗರ ಕಡೆಯಿಂದ ಪಡುಬೆಳ್ಳೆ ಕಡೆಗೆ ಬರುತ್ತಿದ್ದ ಕಾರಿನ ಚಾಲಕ ಮನೋಜ್ ಎಂಬಾತ ಓವರ್‌ಟೇಕ್ ಮಾಡುವ ಭರದಲ್ಲಿ ಪಾಜಕ ಕ್ಷೇತ್ರದ ದ್ವಾರದ ಬಳಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ರಿಕ್ಷಾದಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಆಗ್ನಿಸ್ ನೊರೊನ್ಹಾ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಾಲಕ ಹಾಗೂ ಜೆಸಿಂತಾ ಅವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *