
ಮಂಗಲ್ಪಾಡಿ: ನೂತನವಾಗಿ ಆರಂಭಗೊoಡ ಕುಣಿತ ಭಜನೆ ಹಾಗೂ ನೃತ್ಯ ತಂಡ ನವದುರ್ಗ ಟೀಮ್ ಪುಳಿಕುತ್ತಿ ಇದರ ಪದಾಧಿಕಾರಿಗಳನ್ನು ಇತ್ತೀಚೆಗೆ ಪುಳಿಕುತ್ತಿ ಅಂಗನವಾಡಿಯಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ಸಚಿತ ಟೀಚರ್, ಉಪಾಧ್ಯಾಕ್ಷರಾಗಿ ವೀಣಾ, ಕಾರ್ಯದರ್ಶಿಯಾಗಿ ಸವಿತ ರಾಘವೇಂದ್ರ, ಜತೆ ಕಾರ್ಯದರ್ಶಿಯಾಗಿ ಶ್ವೇತ, ಕೋಶಾಧಿಕಾರಿ ರೀನಾ, ಜತೆ ಕೋಶಾಧಿಕಾರಿ ಸರಸ್ವತಿ, ಹಾಗೂ ಕುಣಿತ ಭಜನೆ ಮತ್ತು ನೃತ್ಯ ಶಿಕ್ಷಕ, ಶಿಕ್ಷಕಿಯರಾಗಿ ತನ್ಮಯಿ, ಸರೋಜಿನಿ, ಆಶಾಲತಾ ಇವರನ್ನು ಆಯ್ಕೆ ಮಾಡಲಾಯಿತು. ಸರೋಜಿನಿ ಟೀಚರ್ ಸ್ವಾಗತಿಸಿ, ವಂದಿಸಿದರು





