ಉಪ್ಪಳದಲ್ಲಿ  ಭರದಿಂದ ನಡೆಯುತ್ತಿರುವ ಪ್ಲೈ ಓವರ್ ಕಾಮಗಾರಿ: ವಾಹನಗಳ ದಟ್ಟಣೆಯಿಂದ  ಸಮಸ್ಯೆ ಸೃಷ್ಟಿ

Share with


ಉಪ್ಪಳ:   ಹೆದ್ದಾರಿ ಅಭಿವೃದ್ದಿ ಕಾಮಗಾರಿ ಭರದಿಂದ ನಡೇಯುತ್ತಿರುವಂತೆ ಉಪ್ಪಳ ಪೇಟೆಯಲ್ಲಿ  ಪ್ಲೈ ಓವರ್ ನಿರ್ಮಾಣದ ಕೆಲಸವೂ ಅತೀ ವೇಗದಿಂದ ಸಾಗುತ್ತಿದೆ. ಈಗಾಗಲೇ ಒಂದು ಭಾಗದ ಪಿಲ್ಲರ್‌ಗಳ ಕಾಮಗಾರಿ ಪೂರ್ತಿಗೊಂಡಿದ್ದು, ಭೀಮ್ ಅಳವಡಿಸಲಾಗಿದೆ. ಇನ್ನೊಂದು ಭಾಗದ ಪಿಲ್ಲರ್ ನಿರ್ಮಾಣ  ಅಂತದಲ್ಲಿದ್ದು,  ಭೀಮ್ ಅಳವಡಿಸುವ ಕೆಲಸಗಳ ತಯಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಹಿನ್ನೆಲೆಯಲ್ಲಿ  ರಸ್ತೆ ಕಿರಿದಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ  ಉಂಟಾಗುತ್ತಿರುವುದು ಭಾರೀ ದೊಡ್ಡ ಸಮಸ್ಯೆಯಾಗಿದೆ. ಕೆಲವು ವಾಹನಗಳನ್ನು ಸರ್ವೀಸ್ ರಸ್ತೆ ಬದಿಯಲ್ಲಿಯೇ  ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದು ಇನ್ನಷ್ಟು ಸಮಸ್ಯೆಗೆ ಕಾರಣಾಗುತ್ತಿದೆ.   ವಾಹನಗಳ ದಟ್ಟಣೆಯಿಂದ ಬಸ್ ಗಳಿಗೆ ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸಾದ್ಯವಾಗುತ್ತಿಲ್ಲ. ಇದರಿಂದ ಚಾಲಕರ ಹಾಗೂ ಪ್ರಯಣಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಕಾಮಗಾರಿಯಿಂದಾಗಿ ಉಪ್ಪಳ ಬಸ್ ನಿಲ್ದಾಣದೊಳಗೆ ಕೆಲವು ಖಾಸಾಗಿ ಬಸ್‌ಗಳು ಮಾತ್ರ ಪ್ರವೇಶಿಸುತ್ತಿದೆ.  ಇದರಿಂದ ನಿಲ್ದಾಣದೊಳಗಿರುವ ವ್ಯಾಪಾರಸ್ತರು ವ್ಯಾಪಾರ ಇಲ್ಲದೆ  ಸಂಕಷ್ಟಕ್ಕೀಡಾಗಿದ್ದಾರೆ. ಅಧಿಕಾರಿಗಳು ಕೂಡಲೇ ಪ್ಲೆöÊ ಓವರ್ ಕಾಮಗಾರಿಯನ್ನು ಶೀಘ್ರ ಪೂರ್ತಿಗೊಳಿಸಿದರೆ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಲಭಿಸಬಹುದೆಂದು  ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ


Share with

Leave a Reply

Your email address will not be published. Required fields are marked *