

ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ರೋಗಗಳ ಸಂಖ್ಯೆಯೂ ಕ್ರಮೇಣ ಹೆಚ್ಚುತ್ತಿದೆ. ನಿಮ್ಮ ಬ್ಲಡ್ ಗ್ರೂಪ್ ಕೂಡ ನಿಮ್ಮ ರೋಗದ ಪ್ರಮಾಣವನ್ನು ನಿರ್ಧರಿಸುತ್ತದೆ ಎಂಬುದು ನಿಮಗೆ ಗೊತ್ತಾ?
ಹೌದು.. O+, O- ಗುಂಪುಗಳಿಗೆ ಹೋಲಿಸಿದರೆ, A+, A-, B+, B-, AB+, AB- ರಕ್ತದ ಗುಂಪಿನ ಜನರಲ್ಲಿ ಬ್ರೈನ್ ಸ್ಟ್ರೋಕ, ಹೈಪರ್ಲಿಪಿಡೆಮಿಯಾ, ಹೃದಯ ವೈಫಲ್ಯ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗಬಹುದು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ರಕ್ತ ಹೆಪ್ಪುಗಟ್ಟುವಿಕೆ ಸಂಭವಿಸುವ ಸಾಧ್ಯತೆಯೂ ಹೆಚ್ಚು ಎನ್ನಲಾಗಿದೆ.




