ಮಂಜೇಶ್ವರ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಶಕ್ತಿ, ದುರ್ಗಾವಾಹಿನಿ,ಮಂಜೇಶ್ವರ ಪ್ರಖಂಡ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಪ್ರಖಂಡ ಸಮಿತಿ ರಚನೆ ಹೊಸಂಗಡಿ ಪ್ರೇರಣಾದಲ್ಲಿ ನಡೆಯಿತು. ಕೃಷ್ಣ ಶಿವಕೃಪಾ ಕುಂಜತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ವಿಶ್ವಹಿಂದೂ ಪರಿಷತ್ ಕೇರಳ ಪ್ರಾಂತ ಸಹ ಸತ್ಸಂಗ ಪ್ರಮುಖ್ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಉದ್ಘಾಟಿಸಿದರು. ಜಿಲ್ಲಾ ವಿಭಾಗದ ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ವೇಳೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರು ಕೃಷ್ಣ ಶಿವ ಕೃಪಾ
ಕುಂಜತ್ತೂರು, ,ಉಪಾಧ್ಯಕ್ಷರುಗಳಾಗಿ ಮೋಹನ್ ಬಲ್ಲಾಳ್ ಬಾಯಾರು ,
ಜಗದೀಶ್ ದೇರಂಬಳ, ಕಾರ್ಯದರ್ಶಿ ರಂಜಿತ್ ಕೋಡಿಬೈಲ್ ,ಸಹ ಕಾರ್ಯದರ್ಶಿಗಳಾಗಿ ಶ್ಯಾಮ್ ನಾಯ್ಕಾಪು , ನಿರಂಜನ್ ಚೆರುಗೋಳಿ
ಬಜರಂಗದಳ ಸಂಯೋಜಕ್ ರವಿ ಪರಂಕಿಲ ,ಸಹ ಸಂಯೋಜಕ್ ಸಂಪತ್ ವರ್ಕಾಡಿ, ಸೇವಾ ಪ್ರಮುಖ್ ಸತ್ಯ ವೀರನಗರ, ಸತ್ಸಂಗ ಪ್ರಮುಖ್ ಸಂಜೀವ ಮಾಡ, ಸಹ ಸತ್ಸಂಗ ಆನಂದ್ ತಚ್ಚಿರೆ , ಧರ್ಮ ಪ್ರಸಾರ ಪ್ರಮುಖ್ ವಸಂತ್ ಭಟ್ ತೊಟ್ಟೆತ್ತೋಡಿ ,ಪ್ರಚಾರ ಮತ್ತು ಪ್ರಸಾರ ಪ್ರಮುಖ್ ರತನ್ ಹೊಸಂಗಡಿ
ಮಾತೃ ಶಕ್ತಿ ಪ್ರಮುಖ್ ಚಂಚಲಾಕ್ಷಿ ಕಡಪ್ಪರ, ಸಹ ಪ್ರಮುಖ್ ಕುಸುಮ ಸದಾನಂದ ಕೋಡಿಬೈಲ್ , ದುರ್ಗಾ ವಾಹಿನಿ ಸಂಯೋಜಕಿ ಪ್ರೀತಿ ನಿಶಾನ್ ರೈ ಮೀಯಪದವು, ಸಹ ಸ0ಯೋಜಕಿ ಸುಶ್ಮಿತಾ ಶಿವಾನಂದ ಶೆಟ್ಟಿ ತಿಂಬರ ಇವರು ಆಯ್ಕೆಯಾದರು. ರಂಜಿತ್ ಕೋಡಿಬೈಲ್ ಸ್ವಾಗತಿಸಿ, ನಿರಂಜನ್ ದನ್ಯವಾದ ನೀಡಿದರು.