ATM ನಿಂದಲೇ ಡ್ರಾ ಮಾಡಿಕೊಳ್ಳಬಹುದು PF ಹಣ

Share with

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿ ಹೊಸ ವರ್ಷಕ್ಕೆ ಹಲವು ಬದಲಾವಣೆಗಳು ಜಾರಿಗೆ ಬರಲಿವೆ.

ಇದರಲ್ಲಿ ಪ್ರಮುಖವಾಗಿ 2025ರಿಂದ ಉದ್ಯೋಗಿಗಳು ನೇರವಾಗಿ ATMನಿಂದಲೇ PF ಹಣವನ್ನು ವಿತ್‌ ಡ್ರಾ ಮಾಡಬಹುದಾಗಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವಾ ಮಾಹಿತಿ ನೀಡಿದ್ದಾರೆ.

ಇದಲ್ಲದೆ EPFನಲ್ಲಿ ಉದ್ಯೋಗಿಯಿಂದ ಠೇವಣಿ ಮಾಡಲಾಗುತ್ತಿರುವ ಹಾಲಿ ಶೇ. 12ರಷ್ಟು ಮೊತ್ತವನ್ನು ಹೆಚ್ಚಿಸಲು ಸಹ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


Share with