ಬ್ರಿಡ್ಜ್‌ ಗೆ ಡಿಕ್ಕಿ ಹೊಡೆದ ಶಾಲಾ ಬಸ್; ಶಿಕ್ಷಕಿ ಸಾವು, ಮಕ್ಕಳು ಗಂಭೀರ!

Share with

ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್‌ಗೆ ಶಾಲಾ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿ ಸಾವನ್ನಪ್ಪಿದ್ದು, 15 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ.

NH 52ರ ಭೋಜ್ಞಾವಾ ಕಟ್ ಬಳಿ ಅಪಘಾತ ಸಂಭವಿಸಿದೆ. ಬ್ರಿಡ್ಜ್‌ನಿಂದ ಇಳಿಯುವಾಗ ಬಸ್ ಬ್ರೇಕ್ ಫೇಲ್ ಆದ ಕಾರಣ ಬಸ್ ಪಲ್ಟಿಯಾಗಿತ್ತು. ಬಸ್‌ನಲ್ಲಿ 30-35 ಮಕ್ಕಳಿದ್ದರು ಎನ್ನಲಾಗಿದೆ. ಶಾಲಾ ಬಸ್‌ ನಿಯಮ ಉಲ್ಲಂಘಿಸಿ ವೇಗವಾಗಿ ಚಲಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ತನಿಖೆ ಮುಂದುವರೆದಿದೆ.


Share with