ಬೆಂಗಳೂರು: ಬಿಗ್ಬಾಸ್ ಮನೆಯಿಂದ ಐಶ್ವರ್ಯ ಸಿಂಧೋಗಿ ನಿನ್ನೆ ಹೊರ ಬಂದಿದ್ದಾರೆ. ಬರೋಬ್ಬರಿ 93 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಅವರು ವೀಕ್ಷಕರನ್ನು, ತಮ್ಮ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.


ಕಳೆದ ಕೆಲವು ವಾರಗಳಿಂದ ಐಶ್ವರ್ಯ ಸಿಂಧೋಗಿ ಬಾಟಂ 2ನಲ್ಲಿದ್ದರು. ಈ ವಾರ ಬಾಟಂ 2ನಲ್ಲಿ ಸ್ನೇಹಿತರಾದ ಮೋಕ್ಷಿತಾ ಪೈ ಹಾಗೂ ಐಶ್ವರ್ಯ ಇದ್ದರು. ಅಂತಿಮವಾಗಿ ಐಶ್ವರ್ಯ ಮನೆಯಿಂದ ಹೊರ ಬಿದ್ದಿದ್ದಾರೆ. ಮನೆಯಿಂದ ಹೊರ ಬರ್ತಿದ್ದ ಐಶ್ವರ್ಯಗೆ ಬಿಗ್ಬಾಸ್ ಕಡೆಯಿಂದ ವಿಶೇಷ ಗಿಫ್ಟ್ ಒಂದು ಸಿಕ್ಕಿತು. ತುಂಬಾ ಭಾವುಕರಾಗಿದ್ದ ಸ್ಪರ್ಧಿ, ಕಣ್ಣೀರು ಇಡುತ್ತಲೇ ಆಚೆ ಬಂದರು.
ನಂತರ ಕಿಚ್ಚನ ಎದುರು ಐಶ್ವರ್ಯ ಎದುರಾರದು. ಅಲ್ಲಿ ತೋರಿಸಿದ ವಿಟಿ ನೋಡಿ ಮತ್ತೆ ಭಾವುಕರಾದರು. ಮೊದಲಿದ್ದ ಎನರ್ಜಿಯನ್ನು ಕಳೆದುಕೊಂಡೆ. ಅದೇ ನನ್ನ ಸೋಲಿಗೆ ಕಾರಣವಾಯ್ತು ಅಂತಾ ಕಿಚ್ಚನ ಎದುರು ಹೇಳಿದರು. ಇನ್ನು ಕಿಚ್ಚ ಸುದೀಪ್ ಸ್ಟೇಜ್ನಿಂದ ನಿರ್ಗಮಿಸುವ ವೇಳೆ, ಐಶ್ವರ್ಯ ಮುಂದೆ ಯಾವ ಪ್ಲಾನ್ನಲ್ಲಿದ್ದೀರಿ ಎಂದು ಕೇಳ್ತಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯ.. ಸರ್ ನಾನು ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕು ಎಂದು ಬೇಡಿಕೊಳ್ತಾರೆ. ಅದಕ್ಕೆ ಸುದೀಪ್, ‘ಓ..’ ಎನ್ನುತ್ತಾರೆ. ಮತ್ತೆ ಮಾತು ಮುಂದುವರಿಸಿದ ಐಶ್ವರ್ಯ, ಸರ್ ಯಾವುದೇ ಪಾತ್ರವಾದರೂ ಪರವಾಗಿಲ್ಲ. ಚಿಕ್ಕ ರೋಲ್ ಆದರೂ ಪರ್ವಾಗಿಲ್ಲ. ನಾನು ಮಾಡ್ತೀನಿ ಎಂದಿದ್ದಾರೆ. ಅದಕ್ಕೆ ಸುದೀಪ್, ‘ಡನ್’ ಅಂತಾ ಹೇಳಿದ್ದಾರೆ. ಕೊನೆಗೆ ಐ ವಿಶ್ಯು ಆಲ್ ದಿ ಬೆಸ್ಟ್. ನೀವು ಇದ್ದಷ್ಟು ವಾರಗಳು ತುಂಬಾ ಅದ್ಭುತವಾಗಿ ಆಡಿದ್ದೀರಿ. ಒಳ್ಳೆದಾಗಲಿ ಎಂದು ಐಶ್ವರ್ಯ ಅವರನ್ನು ಸ್ಟೇಜ್ನಿಂದ ಬೀಳ್ಕೊಟ್ಟರು.




