ಚೀನಾ; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Share with

ಹೊಸದಿಲ್ಲಿ: ಚೀನಾ ಲಡಾಕ್ ನಲ್ಲಿ ಮತ್ತೆ ಕಿರಿಕ್ ಆರಂಭಿಸಿದ್ದು ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳ ನಿರ್ಮಾಣ ಮಾಡಿದ್ದು, ವಿದೇಶಾಂಗ ಇಲಾಖೆ ಈ ಕ್ರಮವನ್ನು ಬಲವಾಗಿ ಖಂಡಿಸಿದೆ.

ಎರಡು ಕೌಂಟಿಗಳನ್ನು ಮಾಡುವ ಮೂಲಕ ಭಾರತದ ಭೂಭಾಗವನ್ನು ಆಳಿತಾತ್ಮಕ ಪ್ರಕ್ರಿಯೆಗೆ ಬಳಸಿಕೊಳ್ಳುವ ಕ್ರಮದ ಘೋಷಣೆಯನ್ನು ಇತ್ತೀಚೆಗೆ ಚೀನಾ ಮಾಡಿದೆ.
ಈ ಬಗ್ಗೆ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ” “ಚೀನಾದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ನೋಡಿದ್ದೇವೆ. ಈ ಕೌಂಟಿಗಳೆಂದು ಕರೆಯಲ್ಪಡುವ ಅಧಿಕಾರ ವ್ಯಾಪ್ತಿಯ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಬರುತ್ತವೆ.” ಎಂದಿದ್ದಾರೆ.

ಲಡಾಖ್‌ನ ಭಾಗವಾಗಿರುವ ಚೀನಾದ ಹೊಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಘೋಷಣೆಯ ಕುರಿತು ಭಾರತವು ಚೀನಾದೊಂದಿಗೆ “ತೀವ್ರ ಪ್ರತಿಭಟನೆ” ಸಲ್ಲಿಸಿದೆ. ಲಡಾಖ್‌ನಲ್ಲಿ ಚೀನಾದ ಅಕ್ರಮ ಆಕ್ರಮಣವನ್ನು ಎಂದಿಗೂ ಭಾರತ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *