ಉರ್ಮಿ ಸೇತುವೆಯ ಅಡಿಭಾಗದ ಆಧಾರ ಕಂಬ ಕುಸಿದು ಮೂರು ತಿಂಗಳು ಕಳೆದರೂ ಇನ್ನೂ ದುರಸ್ಥಿಗೆ ಕ್ರಮಯಿಲ್ಲ: ಊರವರ ಸಂಚಾರಕೆ ಅಡಚಣೆ

Share with


ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್- ಕೊಮ್ಮಂಗಳ ರಸ್ತೆಯ ಉರ್ಮಿಯಲ್ಲಿ ಸೇತುವೆಯ ಒಂದು ತುದಿಯ ಅಡಿಭಾಗದ ಕಂಬ ಕುಸಿದು ಬಿದ್ದು ಮೂರು  ತಿಂಗಳು ಕಳೆದರೂ ಇನ್ನೂ ದುರಸ್ಥಿ ಕಾರ್ಯ ನಡೆಯದಿರುವುದು ಊರವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ಅಕ್ಟೋಬರ್ ತಿಂಗಳ 12ರಂದು ರಾತ್ರಿ ಕಂಬ ದಿಡೀರನೆ ಕುಸಿದು ಬಿದ್ದಿದೆ. ಇದೀಗ ಈ ಸೇತುವೆಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಮಾತ್ರ ಆತಂಕದಿoದಲೇ ಸಂಚರಿಸುತ್ತಿದರು. ಆದರೆ  ಇದೀಗ ಅಧಿಕಾರಿಗಳು  ವಾಹನಗಳು ಸಂಚರಿಸದoತೆ ತಡೆಗೋಡೆ ನಿರ್ಮಿಸಲಾಗಿದೆ. ಈಗಾಗಲೇ ಮೈನರ್ ಇರಿಗೆಶನ್ ಇಲಾಖೆ ಅಧಿಕಾರಿಗಳು ತಲುಪಿ ಪರಿಶೀಲನೆ ನಡೆಸಿ  ಶೀಘ್ರ ದುರಸ್ಥಿಕಾರ್ಯ ನಡೆಸುವುದಾಗಿ ಭರವಸೆ ನೀಡಿದರೂ ಇದುವರೆಗೂ ದುರಸ್ಥಿಕಾರ್ಯ ನಡೆಯದಿರುವುದು ಊರವರ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಇದೀಗ   ಕೊಮ್ಮಂಗಳ, ಬದಿಯಾರ್, ಪಲ್ಲೆಕೂಡೆಲ್ ಸಹಿತ ವಿವಿಧ ಪ್ರದೇಶಕ್ಕೆ ಕುರುಡಪದವು, ಬಾಯಿಕಟ್ಟೆ ಮೂಲಕ ಸುತ್ತಾಗಿ ಸಂಚರಿಸಬೇಕಾಗಿದೆ. ಸಂಬoಧಪಟ್ಟ ಅಧಿಕಾರಿಗಳು ಕೂಡಲೇ ಸೇತುವೆಯ ದುರಸ್ಥಿ ಕಾರ್ಯವನ್ನು ಮಾಡಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *