ಸಿಟಿ ರವಿಗೆ ಬಂತು ಕೊಲೆ ಬೆದರಿಕೆ ಪತ್ರ.. ಕಳುಹಿಸಿದ್ದು ಯಾರು?

Share with

ಬಿಜೆಪಿ ನಾಯಕ ಸಿಟಿ ರವಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಬಳಿ ಕ್ಷಮೆ ಕೇಳಬೇಕು. 15 ದಿನದೊಳಗೆ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿರುವ ಸಿಟಿ ರವಿ ನಿವಾಸಕ್ಕೆ ಬೆದರಿಕೆ ಪತ್ರ ಕಳುಹಿಸಲಾಗಿದೆ. ಅನಾಮಧೇಯ ಪತ್ರ ಇದಾಗಿದ್ದು, ಬಸವನಹಳ್ಳಿ ಠಾಣೆಗೆ ದೂರು ನೀಡಲಾಗಿದೆ. ಸಿಟಿ ರವಿ ಪುತ್ರನಿಗೂ ಬೆದರಿಕೆ ಒಡ್ಡಲಾಗಿದೆ. ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಶಾಸಕರ ಭದ್ರತೆ ಬಿಗಿಗೊಳಿಸಲಾಗಿದೆ.


Share with