Udupi: ಲಿಂಗಮುದ್ರೆ ಕಲ್ಲು ಪತ್ತೆ!

Share with

ಉಡುಪಿ : ಕುಂದಾಪುರ ತಾಲೂಕು ಸಿದ್ದಾಪುರದ, ಸಿದ್ದಾಪುರ-ಹೊಸಂಗಡಿ ರೋಟರಿ ಕ್ಲಬ್, ಸಣ್ಣಯ್ಯ ಯಡಿಯಾಳ ಸಭಾಭವನದ ಮುಂಭಾಗವಿರುವ, ಅರವಿಂದ ಶೆಟ್ಟಿಯವರ ಸೈಟ್ ನಲ್ಲಿ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ.

ಈ ಕಲ್ಲಿನ ಮಾಹಿತಿಯು, ಸಿದ್ದಾಪುರ ವಾಸುಕಿ ಕ್ಲಿನಿಕ್ ಡಾ. ಜಗದೀಶ್ ಶೆಟ್ಟಿಯವರಿಂದ ತಿಳಿದು ಬಂದ ಹಿನ್ನಲೆಯಲ್ಲಿ ತುಮಕೂರು ವಿ.ವಿಯ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ವೈಶಾಲಿ ಜಿ. ಆರ್ ಸಿದ್ದಾಪುರ, ಇವರು ಸ್ಥಳಕ್ಕೆ ಭೇಟಿ ನೀಡಿ, ಮುಳ್ಳು ಗಿಡಗಳಿಂದ ಅವರಿಸಿದ್ದ ಈ ಕಲ್ಲನ್ನು, ರೋಟರಿ ಮಾಜಿ ಅಧ್ಯಕ್ಷರಾಗಿದ್ದ ಡಿ ನಾಗೇಂದ್ರ ಯಡಿಯಾಳ ಹಾಗೂ ಶಿಕ್ಷಕಿ ಕೃಷ್ಣವೇಣಿಯವರ ಸಹಾಯದಿಂದ ಈ ಕಲ್ಲಿನ ಸುತ್ತಮುತ್ತ ಸ್ವಚ್ಛಗೊಳಿಸಿ ಕಲ್ಲನ್ನು ಪರೀಕ್ಷಿಸಲಾಗಿ ಈ ಕಲ್ಲಿನ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಅದರ ಕೆಳಭಾಗದಲ್ಲಿ ಶಿವಲಿಂಗದ ಕೆತ್ತನೆ ಇರುವುದು ಕಂಡು ಬಂದಿದೆ.

ಈ ಕಲ್ಲು ಸುಮಾರು ಎರಡುವರೆ ಅಡಿ ಎತ್ತರವಿದ್ದು, ಒಂದು ಅಡಿ ಅಗಲವಿದೆ, ಸುಮಾರು ಎರೆಡು ಅಡಿ ಆಳ ಕೆಳಗೆ ಇದ್ದಿರಬಹುದು. ಈ ಭಾಗದಲ್ಲಿ ಈ ಕಲ್ಲನ್ನು ಶಿಲೆಕಲ್ಲು ಎಂದು ಕರೆಯುತ್ತಾರೆ


Share with

Leave a Reply

Your email address will not be published. Required fields are marked *