ಮಂಗಳೂರು : ಕಾವೂರು ಜಂಕ್ಷನ್ ಬಳಿ ಮಂಗಳವಾರ ರಾತ್ರಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ಕಾವೂರು ಪೊಲೀಸರು ಬಂಧನ ಮಾಡಿದ್ದಾರೆ.ಫರಂಗಿಪೇಟೆ ನಿವಾಸಿ ಮಹಮ್ಮದ್ ಫಾಜ್ (24), ಕೇರಳ ತ್ರಿಶ್ಯೂರಿನ ಅರಟ್ಟುಪರಂಬಿಲ್ ನಿವಾಸಿ ಶರೀಫ್ ಎ ಎಸ್ (25) ಮತ್ತು ಸುಳ್ಯ ತಾಲೂಕಿನ ಗಾಂಧೀನಗರ ನಿವಾಸಿ ಮಹಮ್ಮದ್ ಅಶ್ರಫ್ (24) ಬಂಧಿತರು.

ಮೂವರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಹಮ್ಮದ್ ಫಾಜ್ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.




