ಕಾಸರಗೋಡು: ಜೂ.14-15ರಂದು ರೆಡ್ ಅಲರ್ಟ್ ಘೋಷಣೆ; ಶಾಲಾ ಕಾಲೇಜುಗಳಿಗೆ ರಜೆ

Share with

ಕಾಸರಗೋಡು: ಜಿಲ್ಲೆಯಲ್ಲಿ ಜೂ. 14 ಮತ್ತು 15 ರಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆಯ ಆದೇಶದಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ವೃತ್ತಿಪರ ಶಿಕ್ಷಣ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯ, ಮದ್ರಸ, ಅಂಗನವಾಡಿಗಳು, ಟ್ಯುೂಶನ್ ಸೆಂಟರ್ ಗಳಿಗೆ ರಜೆ ಅನ್ವಯವಾಗಲಿದೆ. ಪೂರ್ವ ನಿರ್ಧರಿತ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *