ಅಹಮದಾಬಾದ್ ವಿಮಾನ ದುರಂತ ದಿನದಂದೇ ಪತ್ರಿಕೆಯಲ್ಲಿ ಒಂದೇ ರೀತಿಯ ಜಾಹೀರಾತು ಪ್ರಕಟ ಆಗಿದೆ.

ಸದ್ಯ ಇದಕ್ಕೆ ಯಾರು ಟೀಕೆ, ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಘಟನೆ ನಡೆಯುವ ಬೆಳಗ್ಗೆ ಈ ಜಾಹೀರಾತು ಪ್ರಕಟಗೊಂಡಿರುವುದು ಅಚ್ಚರಿ ಮೂಡಿಸಿದೆ. ಜೂನ್ 12ರ ಬೆಳಗ್ಗೆ ಗುಜರಾತ್ ರಾಜ್ಯಾದ್ಯಂತ ಪ್ರಕಟವಾಗುವ ದಿನಪತ್ರಿಕೆಯೊಂದರ ಮುಖಪುಟದಲ್ಲಿ ಕಿಡ್ಜಾನಿಯಾ (KidZania)ದ ಜಾಹೀರಾತು ಪ್ರಕಟವಾಗಿದೆ. ಇದರಲ್ಲಿ ಬಂದಿರುವ ವಿಮಾನಕ್ಕೂ ಏರ್ ಇಂಡಿಯಾ ಎಂದು ಬರೆಯಲಾಗಿದ್ದು ಕಟ್ಟಡದಿಂದ ಹೊರ ಬಂದಂತೆ ಇದೆ.




