ಸಾಲ ವಸೂಲಾತಿಯಲ್ಲಿ ಸಾಲಗಾರರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ನೀಡಲು RBI ಸಹಾಯವಾಣಿ ಆರಂಭಿಸಿದೆ. 1800-121-1322 ಸಂಖ್ಯೆಗೆ ಕರೆ ಮಾಡುವ ಮೂಲಕ ಸಾಲಗಾರರು ಈ ಸೇವೆ ಬಳಸಬಹುದು. ಪ್ರಸ್ತುತ ಹಿಂದಿ ಹಾಗೂ ಇಂಗ್ಲೀಷಿನಲ್ಲಿ ಸೌಲಭ್ಯವಿದ್ದು, ಶೀಘ್ರದಲ್ಲೇ 10 ಪ್ರಾದೇಶಿಕ ಭಾಷೆಗಳಲ್ಲಿ ವಿಸ್ತರಿಸಲಾಗುವುದು ಎಂದು ವರದಿಯಾಗಿದೆ.

ಅನೇಕ ಹಣಕಾಸು ಸಂಸ್ಥೆಗಳು ನಿಯಮ ಉಲ್ಲಂಘಿಸಿ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ, ಆತ್ಮಹತ್ಯೆಗೂ ಕಾರಣವಾಗುತ್ತಿರುವುದರಿಂದ ಈ ಸೇವೆ ಆರಂಭಿಸಲಾಗಿದೆ.




