ಬೆಂಗಳೂರು: ದಕ್ಷಿಣ ಕನ್ನಡದಲ್ಲಿ ಭಾನುವಾರ ಧಾರಾಕಾರ ಗಾಳಿ, ಮಳೆ ಗುಡುಗು ಅಬ್ಬರಿಸಿದ್ದು, ಸೋಮವಾರ ಕೂಡಾ ಮುಂದುವರಿದಿದೆ. ಹವಾಮಾನ ಇಲಾಖೆ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಕ್ಕೆ ಭಾರಿ ಗಾಳಿ ಮಳೆಯ ಅಲರ್ಟ್ ಕೊಟ್ಟಿದೆ.

ಹೌದು ನಿನ್ನೆ ಬೆಳ್ಳಂಬೆಳಗ್ಗೆ 7 ಗಂಟೆ ಗಂಟೆಗೆ ಅಲರ್ಟ್ ಕೊಟ್ಟಿರುವ ಹವಾಮಾನ ಇಲಾಖೆ ಮುಂದಿನ 3 ಗಂಟೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಕ್ಕೆ ಭಾರಿ ಮಳೆ ಹಾಗೂ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಅಲರ್ಟ್ ಕೊಟ್ಟಿದೆ.
ಯೆಲ್ಲೋ ಅಲರ್ಟ್ ಎಲ್ಲೆಲ್ಲಿ?
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಭಾರಿ ಮಳೆ ಹಿನ್ನೆಲೆ ಜೂನ್ 29 ರವರೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಉಳಿದೆಡೆ ಜೂನ್ 26 ರ ನಂತರ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ ಹಾಗೂ ವಿಜಯಪುರಕ್ಕೆ ಯೆಲ್ಲೋ ಅಲೆರ್ಟ್ ಕೊಡಲಾಗಿದೆ.




