ತಮ್ಮ 18ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದಾಗಿ, ತಮ್ಮ ಮೊದಲ ಪ್ರೀತಿಯ ಬಗ್ಗೆ ಸಮಂತಾ ಮನಬಿಚ್ಚಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಅವರು, ‘ಅವನನ್ನೇ ಮದುವೆಯಾಗುತ್ತೇನೆ ಎಂದು ನಂಬಿದ್ದೆ, ಅವನಿಗಾಗಿ ಟ್ಯಾಟೂ ಹಾಕಿಸಿಕೊಂಡೆ’ ಎಂದು ಹೇಳಿದ್ದಾರೆ.


ಹಾಗಾದ್ರೆ ಆ ಪ್ರೀತಿಯ ಅಂತ್ಯ ಏನಾಯ್ತು? ಈ ಬಗ್ಗೆ ಹೇಳಲು ಅವರು ನಿರಾಕರಿಸಿದರು. ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದ ಸಮಂತಾ ಪ್ರಸ್ತುತ ವಿಚ್ಛೇದನ ಪಡೆದಿದ್ದಾರೆ. ನಿಮ್ಮ ಮೊದಲ ಪ್ರೀತಿಗಾಗಿ ನೀವು ಏನು ಮಾಡಿದ್ದೀರಿ?




