ಗೃಹಲಕ್ಷ್ಮಿಯ ಕಳೆದ 2 ತಿಂಗಳ ಹಣ ಕೆಲವರಿಗೆ ಜಮೆ ಆಗಿಲ್ಲ. ಕೆಲವೊಮ್ಮೆ ತಾಂತ್ರಿಕ ಅಥವಾ ದಾಖಲೆ ಸಂಬಂಧಿತ ಸಮಸ್ಯೆಗಳ ಕಾರಣ ಹಣ ಖಾತೆಗೆ ಜಮೆ ಆಗಿರುವುದಿಲ್ಲ.

ಹೀಗಿದ್ದಲ್ಲಿ ನೀವು ಸ್ಥಳೀಯ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ, ನಿಮ್ಮ ಆಧಾರ್, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆ ಸರಿಯಾಗಿ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಟುಕ್, ಮೊಬೈಲ್ ಸಂಖ್ಯೆ ಈ ದಾಖಲೆಗಳನ್ನು CDPO ಅಧಿಕಾರಿಗಳಿಗೆ ಸಲ್ಲಿಸಿ ಸರಿಪಡಿಸಿಕೊಳ್ಳಿ.




