ಕಾಸರಗೋಡು : ಬಿಎಂಎಸ್(ಭಾರತೀಯ ಮಜ್ದೂರ್ ಸಂಘ)ನ 70ನೇ ವರ್ಷದ ಸ್ಥಾಪನಾ ದಿನವಾದ ಜುಲೈ 23 ರಂದು ನಾಯ್ಕಾಪು ಶಾಸ್ತಾ ಅಟೋ ಸ್ಟ್ಯಾಂಡ್ ಬಿಎಂಎಸ್ ಯುನಿಟ್ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು.

ಮುರಳೀಧರ ಯಾದವ್ ನಾಯ್ಕಾಪು, ಐತ್ತಪ್ಪ ಕುಲಾಲ್ ನಾಯ್ಕಾಪು, ಪದ್ಮನಾಭ ಗಟ್ಟಿ ಆಚಂಗೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಾಯ್ಕಾಪು ಬಿಎಂಎಸ್ ಯುನಿಟ್ ನ ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷ ಮಧುರಾಜ್, ಕಾರ್ಯದರ್ಶಿ ಶ್ರೀಕಾಂತ್, ಜೊತೆ ಕಾರ್ಯದರ್ಶಿ ಸುನೀಲ್ ಕುಮಾರ್, ಕೋಶಾಧಿಕಾರಿ ಭಾಸ್ಕರ್ ನಾಯ್ಕಾಪು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.




