ನಕ್ಸಲ್ ಮುಖಂಡ ರೂಪೇಶ್ ಗೆ ಪೊಲೀಸ್‌ ಕಸ್ಟಡಿ ಅಂತ್ಯ..! ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ಮತ್ತೆ ಕೇರಳ ಜೈಲಿಗೆ

Share with

ಬೆಳ್ತಂಗಡಿ: ನಕ್ಸಲ್ ಚಳವಳಿ ಮುಖಂಡ ರೂಪೇಶ್ ಪಿ.ಆ‌ರ್.(57)ನನ್ನು ಕೇರಳ ಜೈಲಿನಿಂದ ಜುಲೈ 22ರಂದು ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನ ಪೊಲೀಸ್‌ ಕಸ್ಟಡಿಗೆ ಪಡೆದು ಮರಳಿ ಕೇರಳ ಜೈಲಿಗೆ ಕರೆದೊಯ್ಯಲಾಗಿದೆ.

2012ರ ಡಿ.10ರಂದು ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳೆ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದ ಸ್ಥಳಕ್ಕೆ ರೂಪೇಶ್‌ನನ್ನು ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಗುರುವಾರ ಪೊಲೀಸ್‌ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬಿಗಿಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕೇರಳ ಜೈಲಿಗೆ ಕರೆದೊಯ್ಯಲಾಯಿತು.


Share with

Leave a Reply

Your email address will not be published. Required fields are marked *