ಕೇಂದ್ರ ಸರ್ಕಾರದಿಂದ ನಡೆಸುವ ಜನಕಲ್ಯಾಣ ಯೋಜನೆಗಳ ಪಟ್ಟಿ

Share with

ಸರ್ಕಾರಗಳು ಸಮಾಜದ ಎಲ್ಲಾ ಸ್ತರ ಮತ್ತು ವಿಭಾಗಗಳಲ್ಲಿ ವಿವಿಧ ಕಲ್ಯಾಣ ಯೋಜನೆಗಳನ್ನು (welfare schemes) ನಡೆಸುತ್ತದೆ. ಹಲವು ಯೋಜನೆಗಳು ಸರಿಯಾದ ಪ್ರಚಾರ ಇಲ್ಲದೇ ಹೆಚ್ಚು ಬಳಕೆಯಾಗದೇ ಉಳಿದುಕೊಳ್ಳಬಹುದು. ಈ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇರಬಹುದು, ಅಥವಾ ಸರ್ಕಾರದ ವತಿಯಿಂದ ಪ್ರಚಾರದ ಕೊರತೆ ಇರಬಹುದು. ಕೇಂದ್ರ ಸರ್ಕಾರ ಬಡವರು, ಶ್ರಮಿಕರು, ರೈತರು, ಸಣ್ಣ ಉದ್ದಿಮೆದಾರರು, ಬೀದಿಬದಿ ವ್ಯಾಪಾರಿಗಳು, ಮಹಿಳೆಯರು, ವೃದ್ಧರು ಹೀಗೆ ಸಮಾಜದ ವಿವಿದ ಸ್ತರಗಳ ಜನರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ನಡೆಸುತ್ತದೆ. ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುವ ವಿವಿಧ ಯೋಜನೆಗಳ (central govt sponsored schemes) ಪಟ್ಟಿ ಈ ಕೆಳಕಂಡಂತಿದೆ:


ಕೇಂದ್ರ ಸರ್ಕಾರದಿಂದ ನಡೆಸುವ ಜನಕಲ್ಯಾಣ ಯೋಜನೆಗಳಿವು:
ಪಿಎಂ ಸುರಕ್ಷಾ ಬಿಮಾ ಯೋಜನೆ: ದುರ್ಬಲ ವ್ಯಕ್ತಿಗಳಿಗೆ ಲೈಫ್ ಇನ್ಷೂರೆನ್ಸ್ ಸ್ಕೀಮ್
ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ: ದುರ್ಬಲ ವ್ಯಕ್ತಿಗಳಿಗೆ ಲೈಫ್ ಇನ್ಷೂರೆನ್ಸ್ ಸ್ಕೀಮ್
ಅಟಲ್ ಪೆನ್ಷನ್ ಯೋಜನೆ: ಪಿಂಚಣಿ ಸ್ಕೀಮ್
ಪಿಎಂ ವಿಶ್ವಕರ್ಮ ಯೋಜನೆ: ಚಮ್ಮಾರ, ಬಡಿಗೆ, ದರ್ಜಿ, ಕುಂಬಾರ ಇತ್ಯಾದಿ ಕರಕುಶಲಕರ್ಮಿಗಳಿಗೆ ಸಾಲದ ನೆರವು ನೀಡುವ ಸ್ಕೀಮ್.
ದೀನದಯಾಳ್ ಅಶಕ್ತ ಪುನವರ್ವಸಿ ಯೋಜನೆ
ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ: ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೂ ನಿರಂತರ ವಿದ್ಯುತ್ ಪೂರೈಕೆಯ ಗುರಿ
ಡಿಜಿಟಲ್ ಇಂಡಿಯಾ: ನಾಗರಿಕರಿಗೆ ಡಿಜಿಟಲ್ ಸರ್ವಿಸ್ ಸಮರ್ಪಕವಾಗಿ ಸಿಗುವ ಗುರಿ.
ಗ್ರಾಮೀಣ ಭಂಡಾರನ್ ಯೋಜನೆ: ಗ್ರಾಮೀಣ ಭಾಗದಲ್ಲಿ ಕೃಷಿ ಆಹಾರ ಉತ್ಪನ್ಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವ ಗುರಿ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ: ಗ್ರಾಮೀಣ ಭಾಗದ ಮನೆಯ ಸದಸ್ಯರಿಗೆ ವರ್ಷದಲ್ಲಿ ಕನಿಷ್ಠ 100 ದಿನ ಕೂಲಿ ಕೆಲಸದ ಖಾತ್ರಿ ಕೊಡುತ್ತದೆ ಮನ್ರೇಗಾ ಸ್ಕೀಮ್.


Share with

Leave a Reply

Your email address will not be published. Required fields are marked *