ಕಾಸರಗೋಡು: ಕಾಞoಗಾಡ್‌ನಲ್ಲಿ ಎದುರಿನಿಂದ ಬಂದ ಖಾಸಗಿ ಬಸ್‌ಗೆ ಸೈಡ್ ನೀಡುವಾಗ ಟ್ಯಾಂಕರ್ ಲಾರಿ ರಸ್ತೆಯಿಂದ ತಪ್ಪಿ ಕಣಿವೆಕಡೆ ಬಿದ್ದು ಅಪಘಾತಕ್ಕೀಡಾದ ಘಟನೆ ನಿನ್ನೆ ಸಂಭವಿಸಿದೆ. ಮಂಗಳೂರಿಂದ ಕೊಯಮತ್ತೂರಿಗೆ ಅನಿಲ ಸಾಗಿಸುತ್ತಿದ್ದ ಲಾರಿ ಇದಾಗಿದೆ.

ಅನಿಲ ಸಾಗಿಸುತ್ತಿದ್ದ ಈ ಲಾರಿಯಲ್ಲಿ ಯಾವುದೇ ಗ್ಯಾಸ್ ಲೀಕ್ ಆಗದೇ ಇರುವುದರಿಂದ ಭಾರೀ ದೊಡ್ಡ ದುರಂತ ತಪ್ಪಿದೆ.
ಮುಂಜಾಗ್ರತಾ ಕ್ರಮವಾಗಿ, ಸುತ್ತಲಿನ ಮನೆಗಳಿಂದ ಜನರನ್ನು ಸ್ಥಳಾಂತರಿಸಲಾಯಿತು.




