ಹಿಂದೂ ಧರ್ಮದಲ್ಲಿ ಚಂದ್ರಗ್ರಹಣವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ಹಿನ್ನೆಲೆ ಗ್ರಹಣ ಸಂಭವಿಸುವ ಮೊದಲು ಸೂತಕದ ಅವಧಿಯನ್ನು ಆಚರಿಸಲಾಗುತ್ತದೆ. 2025ರ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸಲಿದೆ ಎಂದು ವರದಿಯಾಗಿದೆ.


ಭಾರತೀಯ ಕಾಲಮಾನದ ಪ್ರಕಾರ, ಚಂದ್ರಗ್ರಹಣವು ಸೆಪ್ಟೆಂಬರ್ 7ರ ರಾತ್ರಿ 9.58 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 8 ರಂದು ಬೆಳಗಿನ ಜಾವ 1.26 ರವರೆಗೆ ಮುಂದುವರಿಯಲಿದೆ. ಈ ಚಂದ್ರಗ್ರಹಣದ ಒಟ್ಟು ಅವಧಿ 3 ಗಂಟೆ 28 ನಿಮಿಷಗಳು.




