ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬ ಇದೇ ಆ. 5 ರಂದು ಇದೆ. ಹುಟ್ಟುಹಬ್ಬಕ್ಕೂ ಮೂರು ದಿನ ಮುನ್ನವೇ ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸನ್ನಡತೆ ಆಧಾರದಡಿ ಬಿಡುಗಡೆ ಭಾಗ್ಯವಿಲ್ಲ.

ಏಕೆಂದರೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸನ್ನಡತೆ ಅನ್ವಯವಾಗುವುದಿಲ್ಲ. ಹೀಗಾಗಿ ಪ್ರಜ್ವಲ್ಗೆ ಜೈಲು ಶಿಕ್ಷೆ ಕಾಯಂ ಎಂದು ಹೇಳುತ್ತಿವೆ ಕಾನೂನುಗಳು.




