ಮಧ್ಯಪ್ರದೇಶ, ಆಗಸ್ಟ್ 04 : ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಭಯಾನಕ ವಿಡಿಯೋ ವೈರಲ್ (Balaghat Viral) ಆಗುತ್ತಲೇ ಇರುತ್ತದೆ. ಈ ಟ್ರ್ಯಾಕ್ಟರ್ನಲ್ಲಿ ವಿಚಿತ್ರ ಶಬ್ದ, ಇನ್ನು ಕೆಲವೊಂದು ಚಾಲಕನಿಲ್ಲದೆ ಕಾರು ಮುಂದಕ್ಕೆ ಹೋಗುವುದು, ಹೀಗೆ ಹಲವು ಘಟನೆಗಳು ವೈರಲ್ ಆಗುತ್ತದೆ. ಇದೀಗ ಇಲ್ಲೊಂದು ಅಂತಹದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಆಘಾತಕಾರಿ ವಿಡಿಯೋ ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ.

ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಈ ವಿಡಿಯೋ ಸಿಸಿಟಿವಿ ಕ್ಯಾಮರದಲ್ಲಿ (tractor running without driver) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಂದು ಶೆಡ್ನಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ್ಗಳ ಸಾಲಿನಲ್ಲಿ ಒಂದು ಟ್ರ್ಯಾಕ್ಟರ್ ಚಾಲಕನಿಲ್ಲದೆ ಚಲಿಸುತ್ತಿರುವುದನ್ನು ನೋಡಬಹುದು. ಇನ್ನು ಈ ಘಟನೆ ಬಾಲಘಾಟ್ ಜಿಲ್ಲೆಯ ಭಟೇರಾ ಚೌಕಿಯಲ್ಲಿ ನಡೆದಿದ್ದು, ನಿನ್ನೆ ರಾತ್ರಿ ಅಂದರೆ ಆಗಸ್ಟ್ 3ರಂದು ಟ್ರ್ಯಾಕ್ಟರ್ ಚಾಲಕನಿಲ್ಲದೇ ಚಲಿಸಿ, ಮುಂದೆ ಇಟ್ಟಿದ್ದ ಇಟ್ಟಿಗೆಗಳ ರಾಶಿಗೆ ಡಿಕ್ಕಿ ಹೊಡೆದು ನಿಂತಿದೆ.
ಅದೃಷ್ಟವಶಾತ್ ಟ್ರ್ಯಾಕ್ಟರ್ ಹತ್ತಿರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರೂ ಕಾಮೆಂಟ್ ಮಾಡಿದ್ದಾರೆ. ಇದನ್ನು ಅನೇಕರು ಅಹಿತಕರ ಘಟನೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಟ್ರ್ಯಾಕ್ಟರ್ ಹೇಗೆ ತಾನಾಗಿಯೇ ಸ್ಟಾರ್ಟ್ ಆಗಿ ಪಾರ್ಕಿಂಗ್ ಪ್ರದೇಶದಿಂದ ಮುಂದಕ್ಕೆ ಹೋಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಇದು ಶಾರ್ಟ್ ಸರ್ಕ್ಯೂಟ್ನಿಂದ ಆಗಿದೆ ಎಂದು ಹೇಳಿದ್ದಾರೆ.




