ತಿರುವನಂತಪುರ: ಮಗುವಿಗೆ ಜನ್ಮ ನೀಡಿ ದಾಖಲೆ ಪಟ್ಟಿಗೆ ಸೇರಿದ ಅತೀ ಕುಬ್ಜ ಮಹಿಳೆ

Share with

ತಿರುವನಂತಪುರ: ದೇಶದಲ್ಲೇ ಅತೀ ಕುಬ್ಬ ಎಂದೇ ಪರಿಗಣಿಸಲಾಗಿರುವ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.

ಕೇರಳದ ತ್ರಿಶೂರ್‌ನ ಅಯ್ಯಂಥೋಲ್‌ನ ಕೆ.ಕೆ. ಸಿಮಿ ಅವರು 95 ಸೆಂ.ಮೀ ಎತ್ತರ ಇದ್ದಾರೆ. ಸಿಮಿ ಅವರು ಜೂನ್ 23ರಂದು ತ್ರಿಶೂರ್‌ನ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಲಿಮ್ಮಾ ದಾಖಲೆಗಳ ಪಟ್ಟಿಗೆ ಸಿಮಿ ಹೆಸರನ್ನು ಸೇರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಸ್ತುತ ಅವರು ಸಹಕಾರ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗುವಿಗೆ ಜನ್ಮ ನೀಡಿದ ದೇಶದ ಅತೀ ಕುಬ್ಬ ಮಹಿಳೆ ಎಂದು ಆಂಧ್ರಪ್ರದೇಶ ಪಿ.ಕಾಮಾಕ್ಷಿ ಎನ್ನುವವರನ್ನು ಇದುವರೆಗೆ ಪರಿಗಣಿಸಲಾಗಿತ್ತು. ಅವರು 108 ಸೆಂ.ಮೀ ಎತ್ತರವಿದ್ದಾರೆ.


Share with

Leave a Reply

Your email address will not be published. Required fields are marked *