ಜಮ್ಮು & ಕಾಶ್ಮೀರದ ಕಥುವಾದಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನದ ನುಸುಳುಕೋರನನ್ನು ಬಿಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.


ಗಡಿಯಾಚೆಯಿಂದ ಬಂದ ಜನರ ಗುಂಪೊಂದು ಒಳನುಸುಳಲು ಪ್ರಯತ್ನಿಸಿತ್ತು. ನಂತರ ಅವರ ಚಟುವಟಿಕೆಯನ್ನು ನೋಡಿ ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರು ತಕ್ಷಣ ಕಾಲ್ಕಿತ್ತಿದ್ದಾರೆ.




