ಬೆಂಗಳೂರಿನಲ್ಲಿ ಜನರು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಹಾಡಹಗಲೇ ದುಷ್ಕರ್ಮಿಯೊಬ್ಬ ಪಿಜಿಗೆ ನುಗ್ಗಿ ಬೆಸ್ಕಾಂನಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಜುಡಿಷಿಯಲ್ ಲೇಔಟ್‌ನ ಶಿವಾಸ್ ಲೇಡಿಸ್ ಪಿಜಿಗೆ ಏಕಾಏಕಿ ಎಂಟ್ರಿಕೊಟ್ಟ ದುಷ್ಕರ್ಮಿ ಚಾಕು ತೋರಿಸಿ ಬೆದರಿಸಿ ಮಹಿಳೆಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿದ್ದಾನೆ. ಚಿನ್ನಾಭರಣ ಕಿತ್ತುಕೊಳ್ಳಲು ಪ್ರಯತ್ನಿಸಿದ ನಂತರ ಅಲ್ಲೇ ಇದ್ದ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ.




