ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆಯಂದೇ ಬಹು ನಿರೀಕ್ಷಿತ ಫಾಸ್ಟಾಗ್‌ನ ವಾರ್ಷಿಕ ಪಾಸ್ ವ್ಯವಸ್ಥೆ ಜಾರಿಯಾಗಲಿದ್ದು, ಇದು ವಾಣಿಜೈತರ ವಾಹನಗಳಿಗೆ ಒಮ್ಮೆಗೇ ಪಾವತಿ ಮಾಡಿ, ವರ್ಷವಿಡೀ ಟೋಲ್‌ಗಳಲ್ಲಿ ಸಂಚರಿಸಲು ಅನುವು ಮಾಡಿಕೊಡುತ್ತದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಈ ಪಾಸ್ ಸೌಲಭ್ಯ ಪರಿಚಯಿಸಿದ್ದು, ಇದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇ ಪದೆ ಟೋಲ್ ನೀಡುವುದನ್ನು ತಪ್ಪಿಸುತ್ತದೆ.

ಈ ಪಾಸ್‌ಗೆ ಒಮ್ಮೆಗೆ 3,000 ರೂ. ಪಾವತಿ ಮಾಡಿ ವರ್ಷವಿಡೀ 200 ಬಾರಿ ಟೋಲ್ ಪ್ಲಾಜಾದಲ್ಲಿ ಪ್ರಯಾಣಿಸುವ ಅವಕಾಶವಿರಲಿದೆ. ಮುಂಗಡ ಪಾಸ್‌ಗೆ ರಾಜಮಾರ್ಗ ಯಾತ್ರಾ ಆ್ಯಪ್‌ನಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಬುಧವಾರದಿಂದ, ಐಫೋನ್‌ಗೆ ಗುರುವಾರದಿಂದ ಅವಕಾಶ ನೀಡಲಾಗಿದೆ.
ಪ್ರಮುಖಾಂಶ
ಟೋಲ್ ಪ್ಲಾಜಾಗಳಲ್ಲಿ ನಿಂತು ಪಾವತಿ ಮಾಡುವುದನ್ನು ತಪ್ಪಿಸುತ್ತದೆ.
ಪ್ರಸ್ತುತ ಇರುವ ಫಾಸ್ಟಾಗ್ ಅನ್ನೇ ವಾರ್ಷಿಕ ಪಾಸಾಗಿ ಪರಿವರ್ತಿಸಬಹುದು.
ಎಲ್ಲ ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್ ವೇಗಳಲ್ಲೂ ಬಳಸುವ ಅವಕಾಶ.
ವರ್ಗಾವಣೆಗೆ ಅವಕಾಶ ವಿಲ್ಲ. ಬೇರೆ ವಾಹನಕ್ಕೆ ಬಳಸಿದ ತತ್‌ಕ್ಷಣ ನಿಷ್ಕ್ರಿಯ
ಸರಕಾರದ ಅಂದಾಜಿನಂತೆ ವಾರ್ಷಿಕವಾಗಿ 7,000 ರೂ. ಉಳಿತಾಯ.




