Kerala :ಮಿದುಳು ಜ್ವರಕ್ಕೆ ಬಾಲಕಿ ಬಲಿ..!

Share with

ಕೋಯಿಕ್ಕೋಡ್: ಮಿದುಳು ಸೋಂಕಿನಿಂದ (ಅಮೀಬಿಕ್ ಎನ್ಸೆಫಲಿಟಿಸ್‌) ಉತ್ತರ ಕೇರಳದ ಜಿಲ್ಲೆಯೊಂದರ ಒಂಬತ್ತು ವರ್ಷದ ಬಾಲಕಿಯೊಬ್ಬಳು ಎರಡು ದಿನದ ಹಿಂದೆ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಆಗಸ್ಟ್ 13ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದರಿಂದ 14ರಂದೇ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆಕೆ ಅದೇ ದಿನ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಶುಕ್ರವಾರ ರಾತ್ರಿ ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯ ಸಾವಿಗೆ ಮಿದುಳು ಸೋಂಕು ಕಾರಣ ಎಂಬುದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

‘ತಾಮರಸ್ಸೇರಿಯ ಬಾಲಕಿಗೆ ಮಾರಣಾಂತಿಕ ಸೋಂಕು ತಗುಲಿದ ಜಲಮೂಲವನ್ನು ಗುರುತಿಸಲು ಶೋಧ ನಡೆಸಲಾಗುತ್ತಿದೆ. ಅದು ಪತ್ತೆಯಾಗುತ್ತಿದ್ದಂತೆ, ಈಚೆಗೆ ಅದರಲ್ಲಿ ಸ್ನಾನ ಮಾಡಿದವರನ್ನು ಹುಡುಕುತ್ತೇವೆ’ ಎಂದು ಅವರು ಹೇಳಿದರು.

Share with

Leave a Reply

Your email address will not be published. Required fields are marked *