ಕಾಸರಗೋಡು ನಗರದಲ್ಲಿ ಸರಣಿ ಕಳ್ಳತನ

Share with

ಕಾಸರಗೋಡು: ಕಾಸರಗೋಡು ನಗರದಲ್ಲಿ ಅಂಗಡಿಗಳಿಂದ ಸರಣಿ ಕಳ್ಳತನ ನಡೆದಿದೆ. ನಗರದ ಹೃದಯ ಭಾಗವಾದ ಎಂ.ಜಿ. ರಸ್ತೆಯಲ್ಲಿರುವ ಮೂರು ಅಂಗಡಿಗಳಿಂದ ಕಳವು ಹಾಗೂ ಒಂದರಿಂದ ಕಳವಿಗೆತ್ನ ನಡೆದಿದೆ.

ಆ.19ರಂದು ರಾತ್ರಿ ಕಳ್ಳರು ಅಂಗಡಿಗಳಿಗೆ ನುಗ್ಗಿದ್ದಾರೆ. ಫೋರ್ಟ್ ರೋಡ್ ನಿವಾಸಿ ಶಾಲಿನಿ ಎಂಬವರ ಮಾಲಕತ್ವದಲ್ಲಿರುವ ವಿನ್ನರ್ ಫೂಟ್ ವೇ‌ರ್, ಯೂಸಫ್‌ರ ಮಾಲಕತ್ವದಲ್ಲಿ ರುವ ಮಿನಿ ಮಾರ್ಟ್ ಗೋಸರಿ ಶಾಪ್, ಮಾಂಬಾಡ್‌ನ ಎಂ.ಕೆ. ಶಂಸುದ್ದೀನ್‌ರ ಮಾಲಕತ್ವದಲ್ಲಿರುವ ಆಶ್ವಾಸ್ ಕಮ್ಯೂನಿಟಿ ಫಾರ್ಮಸಿ ಎಂಬಿಡೆಗಳಿಂದ ಕಳವು ನಡೆದಿದೆ.

ಚೆಂಗಳ ಪಾಣಲದ ಅಬ್ದುಲ್‌ ಖಾದರ್‌ರ ಮಾಲಕತ್ವದಲ್ಲಿರುವ ತರಕಾರಿ ಅಂಗಡಿಯ ಬೀಗ ಮುರಿಯಲಾಗಿದ್ದು, ಗ್ರಿಲ್ಸ್ ತೆರೆಯಲಾಗದಿರುವುದರಿಂದ ಕಳ್ಳರಿಗೆ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಯೂಸಫ್‌ರ ಅಂಗಡಿಯಿಂದ ಸುಮಾರು 5 ಸಾವಿರ ರೂಪಾಯಿ ಕಳವಿಗೀಡಾಗಿದೆ. ಎರಡು ಪ್ಯಾಕೆಟ್ ಜ್ಯೂಸ್ ಕುಡಿದು ಕಳ್ಳರು ಇಲ್ಲಿಂದ ಕಾಲ್ಕಿತ್ತಿದ್ದಾರೆ. ಜ್ಯೂಸ್‌ನ ಖಾಲಿ ಬಾಟ್ಲಿಗಳು ಮೇಜಿನ ಮೇಲೆ ಪತ್ತೆಯಾಗಿದೆ. ಪೊಲೀಸರು ತಲುಪಿ ಪರಿಶೀಲಿಸಿದ ಬಳಿಕವೇ ಇತರ ಅಂಗಡಿಗಳಿಂದ ಯಾವೆಲ್ಲ ಸಾಮಗ್ರಿಗಳು ಕಳವಿಗೀಡಾಗಿದೆಯೆಂದು ತಿಳಿಯಬಹುದಾಗಿದೆ.


Share with

Leave a Reply

Your email address will not be published. Required fields are marked *