LPG ಸಿಲಿಂಡರ್ ಸ್ಫೋಟ: ಯುವತಿ ಸಾವು

Share with

ಮನೆಯಲ್ಲಿದ್ದ LPG ಸಿಲಿಂಡ‌ರ್ ಸ್ಪೋಟಗೊಂಡು ಯುವತಿ ಸಾವನ್ನಪ್ಪಿದ್ದಾಳೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮರ್ಕಿಕೊಡ್ಲು ಗ್ರಾಮದಲ್ಲಿ ನಡೆದಿದೆ. ರಂಜಿತಾ ನಾಗಪ್ಪ ದೇವಾಡಿಗ (21) ಮೃತ ಯುವತಿ. ಪೋಷಕರು ಕೆಲಸಕ್ಕೆ ತೆರಳಿದ್ದ ವೇಳೆ LPG ಸಿಲಿಂಡ‌ರ್ ಸ್ಫೋಟಗೊಂಡಿದೆ.

ಅನಾರೋಗ್ಯದಿಂದ ಕಾರಣ ರಂಜಿತಾ ಮನೆಯಲ್ಲೇ ಇದ್ದಳು ಎನ್ನಲಾಗಿದೆ. ಸಿಲಿಂಡ‌ರ್ ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶಿರಸಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.


Share with

Leave a Reply

Your email address will not be published. Required fields are marked *