ಕಾಂತಾರ: ಚಾಪ್ಟರ್ 1’ (Kantara Chapter 1) ಚಿತ್ರ ಅನೌನ್ಸ್ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸುತ್ತಾ ಬಂದಿದೆ. ಈಗ ಈ ಚಿತ್ರ ರಿಲೀಸ್ ಆಗಿದೆ. ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಸಿನಿಮಾಗೆ ಪ್ರೀಮಿಯರ್ ಶೋನ ಆಯೋಜನೆ ಮಾಡಲಾಗಿದೆ. ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ. ರಿಷಬ್ ಶೆಟ್ಟಿ (Rishab Shetty) ಅವರು ಈ ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ. ಹಾಗಾದರೆ ಈ ಚಿತ್ರದ ಇಂಟರ್ವಲ್ತನಕ ಏನೆಲ್ಲ ಇದೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಸಂಪೂರ್ಣ ವಿಮರ್ಶೆ ಇನ್ನು ಕೆಲವೇ ಗಂಟೆಗಳಲ್ಲಿ ಅಪ್ಲೋಡ್ ಆಗಲಿದೆ.
ಮೊದಲ ದೃಶ್ಯವೇ ರೋಮಾಂಚಕವಾಗಿದೆ. ಬ್ರಹ್ಮರಾಕ್ಷಸನ ದರ್ಶನವಾಗಿದೆ.
ಸಿನಿಮಾ ಆರಂಭವಾದ ಕೆಲವೇ ಹೊತ್ತಲ್ಲಿ ರಥದ ಚೇಸಿಂಗ್ ದೃಶ್ಯ ಬರುತ್ತದೆ. ಇದರಲ್ಲಿ ರಿಷಬ್ ತೆಗೆದುಕೊಂಡ ರಿಸ್ಕ್ ಕಾಣಿಸುತ್ತದೆ.
ಪ್ರಕಾಶ್ ತುಮಿನಾಡ್ ಕಡೆಯಿಂದ ಹಾಸ್ಯದ ಹೊಳೆ ಹರಿಯುತ್ತದೆ. ಅವರು ಬಹುವಾಗಿ ನಗಿಸುತ್ತಾರೆ.
ರಿಷಬ್ ಹಾಗೂ ರುಕ್ಮಿಣಿ ಪ್ರೇಮಕತೆ ಮೊದಲಾರ್ಧದಲ್ಲಿ ಬರುತ್ತದೆ. ರೊಮ್ಯಾಂಟಿಕ್ ಸಾಂಗ್ ಕೂಡ ಇದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾನ ರಿಷಬ್ ಶೆಟ್ಟಿ ಅವರು ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲಾರ್ಧದ ಎಲ್ಲಾ ಫ್ರೇಮ್ಗಳು ಅದ್ದೂರಿಯಾಗಿ ಮೂಡಿಬಂದಿವೆ.
ರುಕ್ಮಿಣಿ ವಸಂತ್ ಅವರು ಯುವರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಅಂದಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು.
‘ಕಾಂತಾರ’ ಚಿತ್ರದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಗಮನ ಸೆಳೆದಿತ್ತು. ಎರಡನೇ ಪಾರ್ಟ್ನಲ್ಲೂ ಅದು ಮುಂದುವರಿದಿದೆ. ಸಿನಿಮಾ ಉದ್ದಕ್ಕೂ ಅವರ ಸಂಗೀತ ಗಮನ ಸೆಳೆಯುವಂತಿದೆ.
ಹಿನ್ನೆಲೆ ಸಂಗೀತ ಸಂಯೋಜನೆ ಸಿನಿಮಾಗೆ ತೂಕ ಕೊಡುತ್ತದೆ. ಛಾಯಾಗ್ರಹಣ ಕೂಡ ಅದ್ಭುತವಾಗಿ ಮೂಡಿಬಂದಿದೆ.
ಕಾಡು ಹಾಗೂ ನಾಡಿನ ತಿಕ್ಕಾಟವನ್ನು ತೋರಿಸುವ ಪ್ರಯತ್ನ ನಡೆದಿದೆ.
ಮೈವಿರೇಳಿಸುವ ದೃಶ್ಯ ಹಾಗೂ ಟ್ವಿಸ್ಟ್ ಮೂಲಕ ಮಧ್ಯಂತರದ ಬೋರ್ಡ್ ಬರುತ್ತದೆ.





