ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯ ಟಿಕೆಟ್ ಮಾರಿದ ‘ಕಾಂತಾರ’

Share with

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿನ್ನೆ ಬಿಡುಗಡೆ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ದಾಖಲೆ ಮೊತ್ತದ ಗಳಿಕೆಯನ್ನು ಸಿನಿಮಾ ಮಾಡಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಡೀ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದ ಸಿನಿಮಾ ಆಗಿತ್ತು. ಸಿನಿಮಾ ಬಿಡುಗಡೆಗೆ ಮೊದಲೇ ದಾಖಲೆಗಳನ್ನು ಬರೆಯುವ ನಿರೀಕ್ಷೆ ಇತ್ತು. ಅದರಂತೆ ರಿಷಬ್ ಶೆಟ್ಟಿಯ ಸಿನಿಮಾ ದೊಡ್ಡ ಕಲೆಕ್ಷನ್ ಮಾಡಿದೆ. ಅಂದಹಾಗೆ ಮೊದಲ ದಿನವೇ ಬುಕ್ ಮೈ ಶೋನಲ್ಲಿ ಭಾರಿ ಸಂಖ್ಯೆಯ ಕಲೆಕ್ಷನ್ ಅನ್ನು ಮಾಡಿದೆ ಸಿನಿಮಾ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೊದಲ ದಿನ ಅಂದರೆ ನಿನ್ನೆ ಒಂದೇ ದಿನದಲ್ಲಿ ಬುಕ್ ಮೈ ಶೋ ಆಪ್ ಒಂದರಲ್ಲೇ 1.28 ಮಿಲಿಯನ್ ಟಿಕೆಟ್ಗಳನ್ನು ಮಾರಾಟ ಮಾಡಿದೆ. ಕೇವಲ 24 ಗಂಟೆಯಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ 12,80,000 ಟಿಕೆಟ್ಗಳು ಮಾರಾಟವಾಗಿವೆ. 2025 ರಲ್ಲಿ ಈವರೆಗೆ ಬಿಡುಗಡೆ ಆದ ಯಾವ ಭಾಷೆಯ ಸಿನಿಮಾ ಸಹ ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್ಗಳನ್ನು ಇಷ್ಟು ಕಡಿಮೆ ಅವಧಿಯಲ್ಲಿ ಮಾರಾಟ ಮಾಡಿಲ್ಲ.

ನೆನಪಿರಲಿ, 12,80,000 ಟಿಕೆಟ್ಗಳು ಮಾರಾಟ ಆಗಿರುವುದು ಕೇವಲ ಬುಕ್ ಮೈ ಶೋನಲ್ಲಿ ಮಾತ್ರ. ಪೇಟಿಂ, ಪಿವಿಆರ್, ಐನಾಕ್ಸ್ಗಳ ಅಧಿಕೃತ ವೆಬ್ ಸೈಟ್, ಇತರೆ ಟಿಕೆಟ್ ಬುಕಿಂಗ್ ಆಪ್ಗಳು, ಚಿತ್ರಮಂದಿರಗಳ ಅಧಿಕೃತ ವೆಬ್ಸೈಟ್, ಚಿತ್ರಮಂದಿರಗಳ ಬಳಿಯೇ ಹೋಗಿ ಖರೀದಿ ಮಾಡಿರುವ ಟಿಕೆಟ್ಗಳ ಲೆಕ್ಕ ಇದರಲ್ಲಿ ಸೇರಿಲ್ಲ. ಕೇವಲ 24 ಗಂಟೆಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್ ಮಾರಾಟ ಮಾಡಿರುವ ಕೆಲವೇ ಕೆಲವು ಸಿನಿಮಾಗಳ ಪಟ್ಟಿಗೆ ಇದೀಗ ‘ಕಾಂತಾರ: ಚಾಪ್ಟರ್ 1’ ಸಹ ಸೇರಿಕೊಂಡಿದೆ.

ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’: ವೀಕ್ಷಕರಲ್ಲಿ ಹೊಂಬಾಳೆ ಫಿಲಮ್ಸ್ ಮನವಿ

ಕಳೆದ ವರ್ಷ ಬಿಡುಗಡೆ ಆಗಿದ್ದ ‘ಪುಷ್ಪ 2’ ಸಿನಿಮಾ ಕೇವಲ ಒಂದು ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿತ್ತು. 24 ಗಂಟೆಗಳಲ್ಲಿ ಸುಮಾರು 16 ಲಕ್ಷ ಟಿಕೆಟ್ಗಳು ಬಿಕರಿ ಆಗಿದ್ದವು. ‘ಪುಷ್ಪ 2’ ಸಿನಿಮಾ ಮೊದಲ ದಿನ ಸುಮಾರು 81 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೊದಲ ದಿನ 60 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 1000 ಕೋಟಿ ರೂಪಾಯಿಯನ್ನೂ ದಾಟಲಿದೆ ಎನ್ನಲಾಗುತ್ತಿದೆ.


Share with

Leave a Reply

Your email address will not be published. Required fields are marked *