ಉತ್ತರಾಧಿಕಾರಿ ನೇಮಕಕ್ಕೆ ಇದು ಮೈಸೂರು ರಾಜರ ಮನೆ ಅಲ್ಲ: ಯತೀಂದ್ರಗೆ ತಿವಿದ ಕೈ ಶಾಸಕ

Share with

ದಾವಣಗೆರೆ, (ಅಕ್ಟೋಬರ್ 23): ನವೆಂಬರ್ ಕ್ರಾಂತಿನೋ, ಡಿಸೆಂಬರ್ ಕ್ರಾಂತಿನೋ ಗೊತ್ತಿಲ್ಲ. ಆದ್ರೆ ರಾಜ್ಯ ಕಾಂಗ್ರೆಸ್ನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶುರುವಾಗಿರುವ ನಾಯಕತ್ವ ಬದಲಾವಣೆ ವಿಚಾರ, ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ತಿ ಆಗ್ತಿರುವ ಈ ಹೊತ್ತಲ್ಲಿ ಒಂದು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ಸಿದ್ದರಾಮಯ್ಯನವರ ಉತ್ತರಾಧಿಕಾರಿ ಬಗ್ಗೆ ಯತೀಂದ್ರ ಆಡಿದ ಮಾತು ರಾಜ್ಯ ಕಾಂಗ್ರೆಸ್ ನಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಈ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.

ಇನ್ನು ಈ ಬಗ್ಗೆ ದಾವಣಗೆರೆಯಲ್ಲಿಂದು ಶಾಸಕ ಶಿವಗಂಗಾ ಬಸವರಾಜ್ ಪ್ರತಿಕ್ರಿಯಿಸಿದ್ದು, ಉತ್ತರಾಧಿಕಾರಿ ನೇಮಕ ಮಾಡಲು ಇದು ಮೈಸೂರು ರಾಜರ ಮನೆ ಅಲ್ಲ. ರಾಜರ ವಂಶದಲ್ಲಿ ಉತ್ತರಾಧಿಕಾರದ ಪದ್ಧತಿ ಇರುತ್ತೆ. ಕಾಂಗ್ರೆಸ್ ಹೈಕಮಾಂಡ್ ಪಕ್ಷ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯಗೆ ತಿವಿದಿದ್ದಾರೆ.


Share with

Leave a Reply

Your email address will not be published. Required fields are marked *