ಕಾಸರಗೋಡು: 2026ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಇಂದು 5 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ದೇಶದೆಲ್ಲೆಡೆ ನೀಡಲಾಗುತ್ತಿದೆ.

ಕಾಸರಗೋಡಿನ ಸಂಗಮ್ ಬಟ್ಟಂಪಾರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಶೋಭಾ ನಾಯ್ಕ್, ಆಶಾ ಕಾರ್ಯಕರ್ತೆ ಅನುಹಿತಾ, ವಾರ್ಡ್ ಮೆಂಬರ್ ದೀಪ್ತಿ ನೇತೃತ್ವದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಯಿತು.

ಕೇಳಗುಡ್ಡೆ ಭಜನಾ ಮಂದಿರದ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಶೆಟ್ಟಿ, ಮೊಗ್ರಾಲ್ ಪುತ್ತೂರು ವಾರ್ಡ್ ಮೆಂಬರ್ ಪ್ರಮೀಳಾ ನೇತೃತ್ವದಲ್ಲಿ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ನೆರವೇರಿತು.





