ಭಾರತದ ಯುವಕರು ಅಪಾಯಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ, ಸರ್ಕಾರ ನಿಮ್ಮೊಂದಿಗಿದೆ; ಪ್ರಧಾನಿ ಮೋದಿ

Share with

ನವದೆಹಲಿ, ಜನವರಿ 12: ದೆಹಲಿಯಲ್ಲಿ “ಅಭಿವೃದ್ಧಿ ಹೊಂದಿದ ಭಾರತ- ಯುವ ನಾಯಕರ ಸಂವಾದ”ವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಯುವಕರಿಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಕಾರಗೊಳಿಸಲು ಮನವಿ ಮಾಡಿದರು. ಯುವಕರ ಯಶಸ್ಸು ದೇಶವನ್ನು ಉನ್ನತೀಕರಿಸುತ್ತದೆ. ಯುವಕರು ಮೊದಲು ರಾಷ್ಟ್ರದ ಪ್ರಜ್ಞೆಯನ್ನು ಹೊಂದಿರಬೇಕು. ಯುವಕರ ಶಕ್ತಿಯೇ ಭಾರತದ ಶಕ್ತಿಯಾಗುತ್ತದೆ. ಯುವಕರು ಎಂದಿಗೂ ಅಪಾಯಗಳನ್ನು ಅಥವಾ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ, ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಅವರು ಹೇಳಿದರು.

“ಇಂದು ನೀವು ವಿಕಸಿತ ಭಾರತವನ್ನು ಸಾಧಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೀರಿ. 2047ರಲ್ಲಿ ನಮ್ಮ ಸ್ವಾತಂತ್ರ್ಯದ 100 ವರ್ಷಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಇದು ನಿಮಗೆ ಬಹಳ ಮುಖ್ಯವಾದ ಸಮಯ. ಇದು ನಿಮಗೆ ಒಂದು ಸುವರ್ಣಾವಕಾಶ, ನಿಮ್ಮ ಸಾಮರ್ಥ್ಯವು ಭಾರತದ ಸಾಮರ್ಥ್ಯವಾಗಿರುತ್ತದೆ, ನಿಮ್ಮ ಯಶಸ್ಸು ಭಾರತದ ಯಶಸ್ಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು” ಎಂದು ಮೋದಿ ಯುವಕರಿಗೆ ಕಿವಿಮಾತು ಹೇಳಿದರು.

ಜನವರಿ 12ರಂದು ಭಾರತವು ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತದೆ. ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ. ಅವರ ಆಲೋಚನೆಗಳು ಪ್ರತಿಯೊಬ್ಬ ಯುವಕರಿಗೂ ಸ್ಫೂರ್ತಿ ಮತ್ತು ಮಾರ್ಗದರ್ಶಿಯಾಗಿದೆ. ಅದಕ್ಕಾಗಿಯೇ ಜನವರಿ 12 ಅನ್ನು ವಿಕಸಿತ ಭಾರತ ಯುವ ನಾಯಕರ ಸಂವಾದವಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.


Share with

Leave a Reply

Your email address will not be published. Required fields are marked *