ಮಲಯಾಳಂನ ಹಿರಿಯ ನಟ, ನಿರ್ದೇಶಕ ಇ.ಎ. ರಾಜೇಂದ್ರನ್ (71) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಕೇರಳದ ಕೊಲ್ಲಂನ ಪಟ್ಟತ್ತಾನಂನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ಭಾರತೀಯ ಚಲನಚಿತ್ರ, ದೂರದರ್ಶನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಅವರು ರಂಗಭೂಮಿಯಿಂದ ಸಿನಿರಂಗಕ್ಕೆ ಬಂದರು. 1981ರಲ್ಲಿ ಚಿತ್ರರಂಗ ಪ್ರವೇಶಿಸಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು. ರಾಜೇಂದ್ರನ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.




