ಹಾರ್ಮುಜ್ ಜಲಸಂಧಿ ಭಾರತಕ್ಕೆ ಮುಕ್ತವಾಗಿರುತ್ತದೆ ಎಂದು ಇರಾನ್ ವಿದೇಶಾಂಗ ಸಚಿವ ಅರಾಫ್ಟಿ ಸ್ಪಷ್ಟಪಡಿಸಿದ್ದಾರೆ ಎಂದು ಆ ದೇಶದ ರಾಯಭಾರಿ ಕಚೇರಿ ತಿಳಿಸಿದೆ.

ಭಾರತ ಸೇರಿದಂತೆ ಇರಾನ್ ಮಿತ್ರ ರಾಷ್ಟ್ರಗಳಾದ ಚೀನಾ, ರಷ್ಯಾ, ಇರಾಕ್, ಪಾಕ್ ದೇಶಗಳ ಹಡಗುಗಳಿಗೆ ಹಾರ್ಮುಜ್ ಮೂಲಕ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹಾರ್ಮುಜ್ ತಕ್ಷಣ ಮುಕ್ತಗೊಳಿಸದಿದ್ದರೆ ತೀವ್ರ ಬಿಕ್ಕಟ್ಟು ಎದುರಾಗಲಿದೆ ಎಂದು UN ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಇರಾನ್ ಈ ಘೋಷಣೆ ಮಾಡಿದೆ.




