ಈ ಹೂವು ಈ ವರ್ಷ ಅರಳಿದರೆ ಮತ್ತೆ ಇದನ್ನು ನೋಡಲು 12 ವರ್ಷ ಕಾಯಬೇಕು. ಈ ಹೂವಿನ ಹೆಸರು ನೀಲಕುರಿಂಜಿ. ಇದನ್ನು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ವಿಶೇಷವೆಂದರೆ ಈ ಹೂವು ಭಾರತದಲ್ಲಿ ಮಾತ್ರ ಕಾಣಸಿಗುತ್ತದೆ. ಜಗತ್ತಿನ ಯಾವುದೇ ಭಾಗದಲ್ಲಿ ಈ ಹೂವು ಅರಳಲ್ಲ.

ಇದು ಒಂದು ಮೊನೊಕಾರ್ಪಿಕ್ ಸಸ್ಯ ಆಗಿದ್ದು, ಅರಳಿದ ತಕ್ಷಣ ಮಸುಕಾಗುತ್ತದೆ. ಹೂವು ಒಣಗಿದ ನಂತರ ಮರುನಾಟಿ ಮಾಡಲು 12 ವರ್ಷಗಳು ಬೇಕು. ಸಾಮಾನ್ಯವಾಗಿ ಇದು ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಮಾತ್ರ ಅರಳುತ್ತದೆ.




