ಕೇರಳ ಲಾಟರಿಯಲ್ಲಿ ಬಹುಮಾನ ಗೆದ್ದ ಶಿಕ್ಷಕಿ.. ಪೊಲೀಸ್ ಮೆಟ್ಟಿಲೇರಿದ್ದೇಕೆ..?

Share with

ಕೇರಳ ಲಾಟರಿ ಬಂದಿರುವುದಾಗಿ ನಂಬಿಸಿ ಶಿಕ್ಷಕಿಯೊಬ್ಬರಿಂದ ಹಂತ ಹಂತವಾಗಿ ₹1,99,710 ಹಣ ವರ್ಗಾಯಿಸಿಕೊಂಡು ಆನ್‌ಲೈನ್ ವಂಚನೆ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೇ 22ರಂದು ಶಿಕ್ಷಕಿಯ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಕೇರಳ ಲಾಟರಿ ವಿಭಾಗದವನೆಂದು ಪರಿಚಯಿಸಿಕೊಂಡು ₹50 ಮೌಲ್ಯದ ಎರಡು ಲಾಟರಿ ಖರೀದಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಅನ್ನಪೂರ್ಣ ₹100 ವರ್ಗಾಯಿಸಿದ್ದರು. ಆ ಬಳಿಕ ವಾಟ್ಸಾಪ್‌ನಲ್ಲಿ ಲಾಟರಿ ಗೆದ್ದಿರುವ ಚಿತ್ರವನ್ನು ಕಳುಹಿಸಿದ ವಂಚಕರು, ಬಹುಮಾನದ ಹಣ ವಿತ್‌ಡ್ರಾ ಮಾಡಲು ಟಿಡಿಎಸ್, ಟ್ಯಾಕ್ಸ್ ಹಾಗೂ ಇತರೆ ಶುಲ್ಕ ಪಾವತಿಸಬೇಕು ಎಂದು ನಂಬಿಸಿದ್ದಾರೆ.

ವಂಚಕನ ಮಾತು ನಂಬಿದ ಶಿಕ್ಷಕಿ ಮೇ 22ರಿಂದ ಜೂನ್ 4ರ ನಡುವೆ ಒಟ್ಟು ₹1,99,710 ಹಣವನ್ನು ಆರೋಪಿಗಳು ನೀಡಿದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದರು. ಕೊನೆಗೆ ಬಹುಮಾನದ ಹಣ ನೀಡದೆ ಇದ್ದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *