ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೌದಿ ಅರೇಬಿಯಾದ ರಾಸ್ ತನುರಾ ನಗರದಲ್ಲಿ ಇಂದು (ಭಾನುವಾರ) ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ಪತನಗೊಂಡ ನೈಜ ಸಮಯ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಜೊತೆಗೆ ಮೃತರ ಕುರಿತು ಅಧಿಕಾರಿಗಳು ಯಾವುದೇ ಮಾಹಿತಿಯನ್ನ ಬಹಿರಂಗಪಡಿಸಿಲ್ಲ.
ಅಪಘಾತಕ್ಕೀಡಾಗಿ ಪತನಗೊಂಡ ವಿಮಾನ ಸೌದಿ ಅರಾಮ್ಕೋ ತೈಲ ಕಂಪನಿಗೆ ಸೇರಿದ್ದು, ಮೃತರೆಲ್ಲರೂ ಸೌದಿಯ ನಾಗರಿಕರೇ ಎಂದು ಖಚಿತವಾಗಿದೆ.




