ಬಾಲಕಿ ಮೇಲೆ ಅತ್ಯಾಚಾರವೆಸಗಿ ಕಾಮತೃಷೆ ತೀರಿಸಿಕೊಂಡು, ಬಳಿಕ ಆಕೆಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿದೆ. 2026 ಮೇ 1ರಂದು ಪುಣೆ ಜಿಲ್ಲೆಯ ಭೋರ್ ತಹಸಿಲ್‌ನಲ್ಲಿರುವ ನಸ್ರಾಪುರ ಗ್ರಾಮದಲ್ಲಿ ಭೀಮರಾವ್ ಕಾಂಬ್ಳೆ(65) ಎಂಬವ 3 ವರ್ಷದ ಬಾಲಕಿಯನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಕೊಲೆ ಮಾಡಿದ್ದ.

ಪುಣೆಯ ವೇಗದೂತ ನ್ಯಾಯಾಲಯ ಈ ಘಟನೆ ನಡೆದ 2 ತಿಂಗಳಲ್ಲೇ, ಆರೋಪಿಗೆ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.




