ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಗುಡ್‌ನ್ಯೂಸ್ ನೀಡಿದೆ. 33ನೇ ಕಂತಿನ ₹2000 ಹಣವನ್ನು ಇನ್ನೊಂದು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಅಡಿ 1.24 ಕೋಟಿ ಮಹಿಳೆಯರಿಗೆ ₹76,951.13 ಕೋಟಿ ನೀಡಿದಂತಾಗಿದೆ.
ಇದರ ಅರ್ಥ ಪ್ರತಿ ಮಹಿಳೆಗೆ ₹64,000 ತಲುಪಿದ್ದು, ಈ ಕಂತಿನ ಹಣ ಸೇರಿ ಒಟ್ಟು ₹66,000 ತಲುಪಲಿದೆ ಎಂದು ಮಾಹಿತಿ ನೀಡಿದರು.




