ಮಹಾರಾಷ್ಟ್ರದ ದಿವ್ಯಾಗರ್ ಬೀಚ್ಗೆ ಪ್ರವಾಸಕ್ಕೆ ತೆರಳಿದ್ದ ಪುಣೆಯ 8 ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ತನ್ಮಯ್ ದತ್ತಾತ್ರೇಯ ವಾಹಿಲೆ, ಸುಮಿತ್, ಪ್ರಣವ್, ಕೈವಲ್ಯ, ರಾಜ್ವೀರ್, ಯಶ್, ಸೋಹಮ್ ತುಕಾರಾಂ ಭಂಡವಾಲ್ಕರ್ & ಕೌಸ್ತುಭ್ ಸಂದೀಪ್ ದೌಂಡ್ ಮೃತರು.
ಪುಣೆಯ ‘ವಿನ್ನರ್ಸ್ ಅಕಾಡೆಮಿ’ ತರಬೇತಿ ಕೇಂದ್ರದ ಒಟ್ಟು 48 ಜನ ಬೀಚ್ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಆಟ ಆಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಮೃತರೆಲ್ಲರೂ 16 ವರ್ಷದವರು.




