ಉಪ್ಪಳ: ಜೋಡುಕಲ್ಲು ಬಳಿಯ ಶಾಂತಿಯೋಡು ನಿವಾಸಿ ರಿಕ್ಷಾ ಚಾಲಕ ಸುಂದರ ರವರ ಪತ್ನಿ ಉದ್ಯೋಗ ಖಾತರಿ ಕಾರ್ಮಿಕೆ ಪುಷ್ಪ [47] ನಿಧನರಾದರು. ನ.1ರಂದು ಮಧ್ಯಾಹ್ನ ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಕೂಡಲೇ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

![ಉದ್ಯೋಗ ಖಾತರಿ ಕಾರ್ಮಿಕೆ ಪುಷ್ಪ [47] ನಿಧನ.](https://veekshakavani.com/wp-content/uploads/2023/11/ಉದ್ಯೋಗ-ಖಾತರಿ-ಕಾರ್ಮಿಕೆ-ಪುಷ್ಪ.jpg)
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂದು ರಾತ್ರಿ ನಿಧನರಾದರು. ಇವರು ಪೈವಳಿಕೆ ಪಂಚಾಯತ್‌ನ ಉದ್ಯೋಗ ಖಾತರಿ ಕಾರ್ಮಿಕೆಯಾಗಿದ್ದರು. ಮೃತರು ಮಕ್ಕಳಾದ ವರುಣ್‌ರಾಜ್, ಮೊನೀಶ, ಸಹೋದರರಾದ ಸುಂದರ, ರಾಮ, ಅಶೋಕ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಿನ್ನೆ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.




