ಮಂಗಳೂರು: ಮತದಾರರ ವೇಳಾಪಟ್ಟಿ ಪರಿಷ್ಕರಣೆ ವಿಸ್ತರಣೆ

Share with

ಮಂಗಳೂರು: ಭಾರತ ಚುನಾವಣಾ ಆಯೋಗವು 2024ರ ಜನವರಿ 1ರ ಅರ್ಹತಾ ದಿನಾಂಕದ ಮತದಾರರ ಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ತಿದ್ದುಪಡಿ, ವಿಳಾಸ ಬದಲಾವಣೆ, ವಿವಿಧ ನಮೂನೆ ಅರ್ಜಿ ಫಾರ್ಮ್ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ.

ಮತದಾರರ ವೇಳಾಪಟ್ಟಿ ಪರಿಷ್ಕರಣೆ ವಿಸ್ತರಣೆ

ಪರಿಷ್ಕೃತ ವೇಳಾಪಟ್ಟಿಯಂತೆ ಆಕ್ಷೇಪಣೆಗಳ ವಿಲೇವಾರಿ ಅವಧಿಯನ್ನು 2024ರ ಜನವರಿ 12ಕ್ಕೆ ವಿಸ್ತರಿಸಲಾಗಿದೆ. ದತ್ತಾಂಶಗಳ ಕ್ರೋಡೀಕರಣ ನವೀಕರಣ ಹಾಗೂ ಮುದ್ರಣ ಕಾರ್ಯದ ಅವಧಿಯನ್ನು ಜನವರಿ 17ಕ್ಕೆ ನಿಗದಿಪಡಿಸಲಾಗಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟಣೆ ದಿನಾಂಕವನ್ನು ಜನವರಿ 22ಕ್ಕೆ ವಿಸ್ತರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Share with

Leave a Reply

Your email address will not be published. Required fields are marked *