ಹ್ಯಾಂಗ್‌ಝೌ: ಭಾರತೀಯ ಅಥ್ಲೀಟ್‌ಗಳು ಕಳೆದ ಹದಿನೈದು ದಿನಗಳಿಂದ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ನಲ್ಲಿ 28 ಚಿನ್ನದ ಪದಕ ಸೇರಿ 107 ಪದಕ ಗೆದ್ದು, ಐತಿಹಾಸಿಕ ಸಾಧನೆಯೊಂದಿಗೆ ಏಷ್ಯನ್ ಗೇಮ್ಸ್ ಅಂತ್ಯಗೊಂಡಿದೆ.
ಭಾರತ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನೂರಕ್ಕೂ ಅಧಿಕ ಪದಕ ಗೆದ್ದು ಹೊಸ ದಾಖಲೆ ಬರೆದಿದೆ.
ಏಷ್ಯನ್ ಗೇಮ್ಸ್ ಈ ಬಾರಿ ಭಾರತವು 28 ಚಿನ್ನದ ಪದಕ, 38 ಬೆಳ್ಳಿ ಪದಕ ಹಾಗೂ 41 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಚೀನಾ ಇದ್ದರೆ, ಎರಡನೇ ಸ್ಥಾನವನ್ನು ಜಪಾನ್ ಹಾಗೂ ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ.