ಜಪಾನ್ ವಿಮಾನ ನಿಲ್ದಾಣದಿಂದಲೇ ಪಾಕಿಸ್ತಾನದ ನಕಲಿ ಫುಟ್ಬಾಲ್ ತಂಡ ಗಡಿಪಾರು..!

Share with

ಟೋಕಿಯೋ: ಏಷ್ಯಾಕಪ್‌ನಲ್ಲಿನ ಭಾರತದೊಂದಿಗಿನ ಪಂದ್ಯ, ಹೀನಾಯ ಸೋಲಿನ ನಂತರ ಪಾಕಿಸ್ಥಾನ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಸುದ್ದಿಯಲ್ಲಿದೆ. ಇನ್ನೊಂದೆಡೆ ವೃತ್ತಿಪರ ಫುಟ್‌ಬಾಲ್ ಆಟಗಾರರ ವೇಷ ಧರಿಸಿ ಜಪಾನ್‌ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದ ಪಾಕಿಸ್ಥಾನದ ಮಾನವ ಕಳ್ಳಸಾಗಣೆ ಜಾಲವನ್ನು ಜಪಾನಿನ ಅಧಿಕಾರಿಗಳು ವಂಚನೆಯನ್ನು ಬಹಿರಂಗಪಡಿಸಿದ್ದು, ಆಟಗಾರರೆಂದು ಹೇಳಿಕೊಂಡಿದ್ದ ಇಪ್ಪತ್ತೆರಡು ಮಂದಿ ಶಂಕಿತರನ್ನು ಗಡೀಪಾರು ಮಾಡಿದೆ. ಇದು ಪಾಕಿಸ್ಥಾನವನ್ನು ಜಾಗತಿಕವಾಗಿ ಮತ್ತೊಂದು ಮುಜುಗರಕ್ಕೆ ಗುರಿ ಮಾಡಿದೆ.

ಎಫ್‌ಐಎ ಮೂಲಗಳ ಪ್ರಕಾರ, ಪುರುಷರು ಪೂರ್ಣ ಫುಟ್‌ಬಾಲ್ ಉಡುಗೆಯಲ್ಲಿ ಪ್ರಯಾಣಿಸಿದ್ದು, ಪಾಕಿಸ್ಥಾನ ಫುಟ್‌ಬಾಲ್ ಫೆಡರೇಶನ್ (PFF)) ಜತೆ ಸಂಪರ್ಕವನ್ನು ಸಾಧಿಸಿ ವಿದೇಶಾಂಗ ಸಚಿವಾಲಯ ಹೊರಡಿಸಿದ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (NOC) ಹೊಂದಿದ್ದರು.

ವಿಮಾನ ನಿಲ್ದಾಣದಲ್ಲಿ ವಿಚಾರಣೆಯ ಸಮಯದಲ್ಲಿ ಜಪಾನಿನ ವಲಸೆ ಅಧಿಕಾರಿಗಳಿಗೆ ಅನುಮಾನ ಬಂದಿದ್ದು, ಆ ಗುಂಪನ್ನು ಪಾಕಿಸ್ಥಾನಕ್ಕೆ ಗಡೀಪಾರು ಮಾಡಲು ಕಾರಣವಾಯಿತು. ಪಾಕಿಸ್ಥಾನದ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಹೇಗೆ ಸಾಧ್ಯವಾಯಿತು ಎಂಬುದು ಪ್ರಶ್ನಾರ್ಹವಾಗಿದ್ದು, ಅದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಸಿಯಾಲ್‌ಕೋಟ್‌ನ ಪಾಸೂರ್ ನಿವಾಸಿ ಮಲಿಕ್ ವಕಾಸ್ ಎಂಬಾತ ಗೋಲ್ಡನ್ ಫುಟ್‌ಬಾಲ್ ಟ್ರಯಲ್ ಎಂಬ ನಕಲಿ ಫುಟ್‌ಬಾಲ್ ಕ್ಲಬ್ ಅನ್ನು ಪ್ರಾರಂಭಿಸಿದ್ದ ಎಂದು ವರದಿಯಾಗಿದೆ. ಇದೇ ವಿಧಾನದ ಹಣ ಪಡೆದು ಮೂಲಕ ವಕಾಸ್ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, 2024 ಜನವರಿಯಲ್ಲಿ, ಜಪಾನ್ ನ ಕ್ಲಬ್, ಬೋವಿಸ್ಟಾ ಎಫ್‌ಸಿಯಿಂದ ಇದೇ ರೀತಿಯ ನಕಲಿ ದಾಖಲೆಗಳು ಮತ್ತು ನಕಲಿ ಆಹ್ವಾನಗಳನ್ನು ಬಳಸಿಕೊಂಡು 17 ಮಂದಿಗೆ ಜಪಾನ್‌ಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದ. ಆ ಪುರುಷರಲ್ಲಿ ಯಾರೂ ಹಿಂತಿರುಗಲಿಲ್ಲ ಎನ್ನುವುದು ತಿಳಿದು ಬಂದಿದೆ. ಎಲ್ಲ ಆಟಗಾರರಿಗೆ ಆಮಿಷವೊಡ್ಡಿ ಭಾರೀ ಪ್ರಮಾಣದ ಹಣವನ್ನೂ ಪೀಕಿದ್ದ ಎನ್ನುವುದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *